ಬುಧವಾರ, ಆಗಸ್ಟ್ 12, 2015

ನನ್ನ ಮೊದಲ ಕನಸು ನನಸಾದ ಘಳಿಗೆಯ ರಸನಿಮಿಷಗಳು 7-6-2015

ದಿನಾಂಕ 7-6-2015 ಜೂನ್ ನಲ್ಲಿ ನನ್ನ ಮೊದಲ ಕನಸು ನನಸಾದ ಸೂಸಮಯ
ನನ್ನ ಭಾವನೆಗಳಿಗೆ ಅಕ್ಷರಗಳ ರೋಪ ಕೊಟ್ಟು ನನ್ನ ವಿಚಾರಗಳಿಗೆ ಕವಿತೆಯ
ರೂಪ ಕೊಟ್ಟು ಒಂದು ಪುಸ್ತಕದ ರೂಪದಲ್ಲಿ ಹೊರಬಂದ
ನನ್ನ
"ಸುಡುವ ಬೆಂಕಿಯ ನಗು"
ಕವನಸಂಕಲನ ಬಿಡುಗಡೆ ಸಮಾರಂಭ
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಸವಿನೆನಪುಗಳಾಗಿ
ಈ ಎಲ್ಲ ಚಿತ್ರಗಳು ಈ ಎಲ್ಲ ಜೀವಗಳು
ನನ್ನೊಂದಿಗಿದ್ದ ಆ ಕ್ಷಣಗಳಿಗೆ ನಾನು  
ಭಾವನೆಗಳನ್ನು ಉಣಬಡಿಸುವ ಭಾವಗಳು ಎಂದೇ ಕರೆಯಲು ಇಚ್ಚಿಸುವೆ.


1.
ಪುಸ್ತಕ ಬಿಡುಗಡೆಯ ದಿನ ಹಿರಿಯ ಕವಿಗಳಾದ ಹೆಚ್ ಎಸ್ ವೆಂಕಟೇಶ್ ಮೂರ್ತಿ
ಅವರ ಹಸ್ತಲಾಘವದೊಂದಿಗಿನ ಹಾರೈಕೆ

2.
ನನ್ನ ಕವನ ಸಂಕಲನದ ಮುಖಪುಟ

3.
ಹಸ್ತಲಾಘವ


4.
ನಾವು ಏಳು ಜನ
ಕ್ರಮವಾಗಿ
ಶಂಕರ್ ಸಿಹಿಮೊಗೆ, ನಾನು, ಉಷಾ ರಾವ್, ರಾಘವೇಂದ್ರ ಹೆಗಡೆ,
ಹೇಮಲತಾ ಮೂರ್ತಿ, ಶಿವಕುಮಾರ್ ಮಾಳಿಗೆ, ಅನೀಲ್ ಕುಮಾರ್ ಹೊಸೂರು.


5.
ಕಾರ್ಯಕ್ರಮದ ಬಗ್ಗೆ ಪತ್ರಿಕಾ ವರಧಿ
ಪ್ರಜಾವಾಣಿ


6.
ಶ್ರೀ ಟಿ.ಎನ್.ಶೀತಾರಾಂ ಮತ್ತು ಹೆಚ್ ಎಸ್, ವೆಂಕಟೇಶ್ ಮೂರ್ತಿಯವರಿಂದ
ಕಾರ್ಯಕ್ರಮದ ನೆನಪಿನ ಕಾಣಿಕೆ ಸ್ವೀಕರಿಸುತ್ತಿರುವುದು.


7.
ಕಾರ್ಯಕ್ರಮದ ಕುರಿತು ಪತ್ರಿಕಾ ವರಧಿ
ವಿಜಯ ಕರ್ನಾಟಕ


8.
ಕಾರ್ಯಕ್ರಮದ ಕುರಿತು ಪತ್ರಿಕಾ ವರಧಿ
ರಾಜಧಾನಿ ಎಕ್ಸಪ್ರೆಸ್


9.
ಕವನಸಂಕಲನದ ಕವರ್ ಪೇಜ್


10.
ಏ.ಆರ್.ಮಣಿಕಾಂತ ಸರ್,
 ಸಂತೋಷಕುಮಾರ್ ಮೆಹಂದಳೆ ಮತ್ತು ಅಮೃತಾ ಮೆಹಂದಳೆ ದಂಪತಿಗಳೊಂದಿಗೆ



11.
ಅನೀಲ್ ಮತ್ತು ಶಂಕರ್ ಸ್ನೇಹಿತರೊಂದಿಗೆ


12.
ವಿಜಯಪುರದಿಂದ ಕಾರ್ಯಕ್ರಮಕ್ಕೆ ಆಗಮಿಸಿದ ನನ್ನ ಗೆಳೆಯ
ಪ್ರಮೋದ್ ಕುಮಾರ್ ಪತ್ತಾರ್


13.
ಕವಿಮಿತ್ರರು


14.
ಕಾರ್ಯಕ್ರಮದ ನಿರೂಪಣೆಯ ಹೊನೆ ಹೊತ್ತ ಶ್ರೀಮತಿ ಸಂಧ್ಯಾ ಭಟ್ ಮತ್ತು
ವೆಂಕಟೇಶ್ ಮೂರ್ತಿ ಸರ್ ಹಾಗು ವೈಶಾಲಿ ಪಿ ಹೆಗಡೆಯವರೊಂದಿಗೆ


15.
ಹಸ್ತಲಾಘವ


16.
ಪುಸ್ತಕ ಲೋಕಾರ್ಪಣೆ





ಮಂಗಳವಾರ, ಏಪ್ರಿಲ್ 7, 2015

ಮೂರು ದಿನಗಳು ನೂರು ಭಾವಗಳು--- ಕಾಜಾಣ ಕಾವ್ಯ ಕಮ್ಮಟ 2015

ಮೂರು ದಿನಗಳ ನೂರು ಭಾವಗಳು
*****
ಅಂತರ್ಜಾಲದಲ್ಲಿಯ ಅಂತರಂಗಗಳನ್ನು
ಒಂದುಗೂಡಿಸಿ ಒಂದಾಗಿ
ಕೂಡಿ ಮುಂದಡಿಯಿಡಲು ದಿಟ್ಟ ಹೆಜ್ಜೆ
ಬೆಟ್ಟಕ್ಕೆ ಮುತ್ತಿಡುವ ಬಯಕೆಯಲಿ
ಕೈಕೈ ಜೋಡಿಸಿ
ಮನಸು ಮನಸುಗಳನೊಂದು ಮಾಡಿಕೊಂಡು
ಕಟ್ಟಿದ ಕನಸುಗಳಿಗೊಂದು ನಾಮಕರಣ 
"ಕಾಜಾಣ" ಅನಾವರಣ.

ಮಾಡುವ ಕೆಲಸದಲಿ ಮೈಮನವಿಟ್ಟು
ಮನಸಿಗೆ ಮುಟ್ಟುವಂತೆ
ಗಟ್ಟಿಯಾಗಿ ಕೂಗುವ ಕೂಗಿಗೆ
ಸೋತುಹೋದೆನು ನಾ
ಮಾತು ಮಾತಿನಲೂ ಪ್ರೀತಿ ಬೆರೆಸಿ
ನೇರವಾಗಿ ಮಾತಿಗಿಳಿಯುವ-
ಮನಸಿಗಿಳಿಯುವ ಹೃದಯಸ್ಪರ್ಷಿ
ಜೀವಿಗಳು ಈ
ಮೂರುದಿನಗಳಲಿ ನೂರು ಭಾವಗಳು
ಮೂಡಿ ಮರಿಹಾಕಿವೆ
ಕಾಜಾಣದ ಗೂಡಿನಲಿ ಒಂದಾಗಿ.

ಸುಂದರವೀ ಕವಿಕೂಟ ಸುಮಧುರವಾದ
ಪ್ರಕೃತಿ ನೋಟ ಜೊತೆಗೆ ಸವಿ ಸವಿಯಾದ ಸಿಹಿಯೂಟ
ರವಿಯೂ ತಣ್ಣಗಾಗಿದ್ದನು 
ಕವಿತೆಗಳನುಂಡು
ಬೀಸಿಬರುವ ಗಾಳಿಯಲಿ ಮಾಸಿಹೋಗದ
ಮನಸೊಂದು ಮತ್ತೆ ಮತ್ತೆ
ಹಾಡಾಗುತ್ತಿತ್ತು ಸತ್ಯ.. ಸತ್ಯ..

ಕೂಡಿಕಳೆದ ಕ್ಷಣಗಳು ಕಡಿಮೆ
ಕೇಳಿ ಕಲಿಯಲಾಗದು ಸಾಹಿತ್ಯವನು
ಮಾಡಬೇಕಿಲ್ಲಿ ದುಡುಮೆ
ದೂರದೂರದಿಂದ ಬಂದಿದ್ದವು 
ಕವಲುದಾರಿಗುಂಟ ಕವಿತೆಗಳು
ಒಂದಾಗಿ ಕಳೆದು ಕಟ್ಟಿಕೊಂಡವು ತನ್ನಷ್ಟಕ್ಜೆ ಬಂದಂತೆ
ತನ್ನೊಲುಮೆಯ ಗೂಡನು
ಗೂಡಿನೊಳಗಿನ ಲಾಟಿನು
ಬೆಳಕು ನೀಡಿತ್ತು ಹೃದಯದಲಿ ಕಾಜಾಣದ
ಪ್ರೀತಿನೂ, ಭೇಟಿನೂ.

ಅಗಲಿಬರುವಾಗ ತಗುಲಿದಂತಾಯ್ತು
ಹೃದಯದ ಕಾಲಿಗೊಂದು ಕಲ್ಲು
ನಾಲಿಗೆಯಲಿ ಕವಿತೆಯ ಸವಿಯುಳಿದಿದೆ
ಇಳಿದು ಹೋಗಲು ಮನಸಿಲ್ಲ 
ಕಾಜಾಣ ಕುಳಿತು ಕೂಗುವ ಕಟ್ಟೆ
ನೆನೆದು ನೆನೆದು ಹಿಗ್ಗುವುದಷ್ಟೇ ಅಲ್ಲ 
ಮತ್ತೆ ಮತ್ತೆ ನೆನಪಾಗುವಂತೆ,
ನೇನಪಾಗುವ ನೆನಪಾಗುಳಿಯಿತು 
"ಕಾಜಾಣದ ಕಾವ್ಯ ಕಮ್ಮಟ"
ಬದುಕಿನ ಹಕ್ಕಿಗೆ ರೆಕ್ಕೆಯಾದದ್ದು ಅಷ್ಟೇ ದಿಟ

ಕವಿಮನಸೊಂದು ಹಾಡಾಗುವದು ಈ
ಕಾಜಾಣದ ಗೂಡಿನಲಿ...
ಕಾಜಾಣದ ಗೂಡು ನಾಡಾಗಲಿ...!!

=ಸುರೇಶ್.ಎಲ್.ರಾಜಮಾನೆ. ರನ್ನಬೆಳಗಲಿ.



1. ಕಾಜಾಣದ ಕನಸುಗಾರ ಬೇಲೂರು ರಘು(ನಗು)ನಂದನ್ ಸರ್ ಅವರೊಂದಿಗೆ


2. ಕನ್ನಡ ಸಾಹಿತ್ಯದ ಮೇರು ಪ್ರತಿಭೆ ಸತ್ಯಕಾಮರ "ಸುಮ್ಮನೆ" ಎದುರುಗಡೆ


 3. ನಿಷ್ಕಲ್ಮಷ ಕವಿಹೃದಯವುಳ್ಳ ಕಥೆಗಾರ್ತಿಯರಾದ 
ಸುನಂದ ಕಡಮೆ ಮೇಡಮ್ ಅವರೊಂದಿಗೆ


4. ವಿಶೇಷ ವ್ಯಕ್ತಿತ್ವವುಳ್ಳ ವೀಣಾ ಬನ್ನಂಜೆ ಮೇಡಮ್ ಅವರ ಜೋತೆಗೆ


5.ವಾಗ್ಮಿಗಳು ಪ್ರವಚನಕಾರರು ಆದ ಈಶ್ವರ್ ಮಂಟೂರ್ ಅವರೊಂದಿಗೆ


6.ಚಿತ್ರನಟಿ, ರಂಗಭೂಮಿ ಕಲಾವಿದೆ, ಜನಪ್ರಿಯ ಶಾಸಕಿಯರು ಆದ
ಉಮಾಶ್ರೀಯವರ ಹಸ್ತಾಕ್ಷರ ಪಡೆದ ಖುಷಿಯ ಕ್ಷಣ



7. ಸುಮ್ಮನೆ ಎದುರು ನಾನು ನನ್ನ ಗೆಳೆಯರು


8. 2015ರ ಕಾಜಾಣ ಯುವ ಪುರಸ್ಕಾರ ಪಡೆದ
ಬೆಂಕಿಪಟ್ಣ ಚಿತ್ರದ ಕತೆಗಾರ ಟಿ.ಕೆ.ದಯಾನಂದರ ಜೊತೆಗೆ.


9. ಕವಿತೆಯನ್ನ ಆಲಿಸುತ್ತಿರುವಾಗ


10. ಊಟದ ಜೊತೆಗೆ


11. ಕವಿಗೆಳೆಯರ ಬಳಗ


12. ಪ್ರೊ.ಟಿ.ಯಲ್ಲಪ್ಪ ರ್ ಜೊತೆಗೆ


13. ಪುಟಾಣಿ ಕವಿತೆಗಳೊಂದಿಗೆ


14. ನಾಗತಿಹಳ್ಳಿ ರಮೇಶ್ ಸರ್ ಜೊತೆಗೆ


15. ಭಾವಗೀತೆ ಹಾಡುವಾಗ



16. ಕಾವ್ಯಕಮ್ಮಟದ ಪ್ರಮಾಣಪತ್ರ ಪಡೆದ ಸಮಯ


17. ಕಾಜಾಣದ ಕವಿ ಬಳಗ


18. ಕತ್ತಲೆಗೆ ಬೆಳಕಿನೊಂದಿಗೆ ಬೆಳಕಿಗೆ
ಮೆರಗು ನೀಡಿದ ದೀವಿಗೆ


ಮೂರುದಿನಗಳಲಿ ನೂರು ಭಾವಗಳನ್ನು ಮನಸಿಗಿಳಿಸಿದ
ಕಾಜಾಣ ಕಾವ್ಯಕಮ್ಮಟ
ಮನದಲ್ಲಿ ಶಾಸ್ವತವಾದ ಕ್ಷಣಗಳನ್ನಉ 
ನಮ್ಮ ಬದುಕಿಗೆ ಒದಗಿಸಿದೆ.

ಹೋಸ ತಲೆಮಾರಿನ ಬದುಕು ಕಳೆದುಕೊಳ್ಳುತ್ತಿರುವ
ಸಾಂಸ್ಕ್ೃತಿಕ ಘಟ್ಟಗಳ
ಕುರಿತು
ತಿಳಿದುಕೊಂಡು ಹೆಜ್ಜೆ ಇಡಲು ನಾವೆಲಾಲ ಒಂದಾಗಿ
ಕಟ್ಟೋ ಸಾಹಿತ್ಯದ   ದಾರಿ ಅಲ್ಲಿರುವ
ತೋಡಕುಗಳನ್ನು ತಿದ್ದಿಕೊಂಡು
ಸಾಗುವತ್ತ ನಡೆಯುತ್ತಿರುವ
ಈ ಬಳಗದ ಜೊತೆಗೆ ಕಳೆದ ಮೂರುದಿನಗಳು
ನನ್ನ ಬದುಕಿನಲಿ 
ಅಮೂಲ್ಯವಾದವುಗಳು.




=$ಸೂರ್ಯ *
ಸುರೇಶ್.ಎಲ್.ರಾಜಮಾನೆ, ರನ್ನಬೆಳಗಲಿ

ಮಂಗಳವಾರ, ಮಾರ್ಚ್ 17, 2015

ಗಜೇಂದ್ರಗಡ ಕಾವ್ಯಕಮ್ಮಟದಲ್ಲಿ ನನಗೊದಗಿದ ಸಿಹಿಕ್ಷಣಗಳು

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, 
ಸಮಷ್ಠಿ ಸಮಗ್ರ ಅಭಿವೃದ್ಧಿ ಸಂಸ್ಥೆ ಗಜೇಂದ್ರಗಡ 
ಇವರ ಸಂಯುಕ್ತಾಶ್ರಯದಲ್ಲಿ
ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಗಜೇಂದ್ರಗಡದಲ್ಲಿ 
ದಿನಾಂಕ 12-3-15 ರಿಂದ 14-3-15 ರ ವರೆಗೆ ನಡೆದ 
ಕಾವ್ಯಕಮ್ಮಟದಲ್ಲಿ 
ನನಗೊದಗಿಬಂದ ಸಿಹಿ ಕ್ಷಣಗಳು
1


2


3. ಹಂಪಿ ವಿ ವಿ ಯ ಕೆ.ವಿ.ಪುಟ್ಟಯ್ಯ ಸರ್ ಜೊತೆ



4. ಕಮ್ಮಟದ ಸ್ನೇಹಿತರು


5.ಕಮ್ಮಟದ ಸ್ನೇಹಿತರು



6.ಲಡಾಯಿ ಪ್ರಕಾಶನದ ಶ್ರೀ ಬಸವರಾಜ ಸೂಳಿಬಾವಿ ಸರ್,
ಅನಸೂಯಾ ಕಾಂಬಳೆ ಮೆಡಮ್,
ಕಮ್ಮಟದ ನಿರ್ದೇಶಕರಾದ ಶ್ರೀ ವಾಯ್.ಬಿ.ಹಿಮ್ಮಡಿ ಸರ್,
ಮತ್ತು ಕಮ್ಮಟದ ಗೇಳೆಯರು ಮತ್ತು ನಾನು
ಲಡಾಯಿ ಪ್ರಕಾಶನದ ಪುಸ್ತಕಗಳೊಂದಿಗೆ,



7. ಸಾಹಿತಿಗಳು ಹಾಗೂ ಚಿಂತಕರೂ ಆದ 
ಫಿರ್ ಭಾಷಾ ಸರ್ ಜೋತೆ




8.ಫಿರ್ ಬಾಷಾ ಸರ್ ಜೋತೆ


9.ಶ್ರೀ ಸಿದ್ಧರಾಜ ಪೂಜಾರಿ ಸರ್ ಅದ್ಯಕ್ಷತೆಯಲ್ಲಿ 
ಕವನವಾಚನ



10. ಲಾವಣಿ ಪದಗಳ ಬರಹಗಾರ, ಹಾಡುಗಾರರೂ ಆದ 
ಡಾ.ಬಿ.ಆರ್.ಪೋಲಿಸ್ ಪಾಟೀಲ್ ಸರ್ ಜೊತೆ



11. ಕಾವ್ಯಕಮ್ಮಟದ
 ಯುವ ಕವಿ/ಯತ್ರಿಯರ ಬಳಗ



ಮೇಲಿನ ಪ್ರತಿ ಚಿತ್ರವೂ ನನ್ನ ಬದುಕಿನ ಒಂದು ಅಂಗಗಳಂತೆ
ಕಾವ್ಯದ ಬದುಕಿನಲಿ ನನಗೊಲಿದ
ಈ ಕ್ಷಣಗಳು ತುಂಬಾ ಅಮೂಲ್ಯವಾದವುಗಳು





=$ಸೂರ್ಯ*
=ಸುರೇಶ್.ಎಲ್.ರಾಜಮಾನೆ, ರನ್ನಬೆಳಗಲಿ

ಬುಧವಾರ, ಫೆಬ್ರವರಿ 25, 2015

ವಸಂತನಾಗಮನಕೆ



ನಾನಡೆಯುವ ದಾರಿಯಲಿ 
ನನಗೊಲಿದ ಈ ಸುಂದರಿ
ಬಿಸಿಲನಾಡಿನ 
ಬೇಗೆಯಲಿ ಬೆಂದು ಹೋಗದೇ
ನೋಂದು ನರಳಿದರೂ
ನಗುವ ಸೂಸುತ
ನಿಂತಿಹಳು ವಸಂತನಾಗಮನಕೆ
ಅರಳಿ ನಿಂತಿಹಳು
ಅಂದಚಂದದಿ ಸಿಂಗಾರಗೊಂಡು
ಮೈಮನವನೆಲ್ಲ ಹೂವಿನಿಂದಲೇ
ಸಿಂಗರಿಸಿಕೊಂಡು
ಬರುವ ವಸಂತನ ಬಯಕೆಗೆ
ಹೋದಿಕೆಯಾಗಿ
ಹರಸಿ ಹಾಡಲು ಹಾಡಿ
ಬೇಸಿಗೆಯ ಬೆಸುಗೆಯಲಿ
ಹೂವಾಗಿ ನಗಲು.


=$ಸೂರ್ಯ*