ಮಂಗಳವಾರ, ಏಪ್ರಿಲ್ 7, 2015

ಮೂರು ದಿನಗಳು ನೂರು ಭಾವಗಳು--- ಕಾಜಾಣ ಕಾವ್ಯ ಕಮ್ಮಟ 2015

ಮೂರು ದಿನಗಳ ನೂರು ಭಾವಗಳು
*****
ಅಂತರ್ಜಾಲದಲ್ಲಿಯ ಅಂತರಂಗಗಳನ್ನು
ಒಂದುಗೂಡಿಸಿ ಒಂದಾಗಿ
ಕೂಡಿ ಮುಂದಡಿಯಿಡಲು ದಿಟ್ಟ ಹೆಜ್ಜೆ
ಬೆಟ್ಟಕ್ಕೆ ಮುತ್ತಿಡುವ ಬಯಕೆಯಲಿ
ಕೈಕೈ ಜೋಡಿಸಿ
ಮನಸು ಮನಸುಗಳನೊಂದು ಮಾಡಿಕೊಂಡು
ಕಟ್ಟಿದ ಕನಸುಗಳಿಗೊಂದು ನಾಮಕರಣ 
"ಕಾಜಾಣ" ಅನಾವರಣ.

ಮಾಡುವ ಕೆಲಸದಲಿ ಮೈಮನವಿಟ್ಟು
ಮನಸಿಗೆ ಮುಟ್ಟುವಂತೆ
ಗಟ್ಟಿಯಾಗಿ ಕೂಗುವ ಕೂಗಿಗೆ
ಸೋತುಹೋದೆನು ನಾ
ಮಾತು ಮಾತಿನಲೂ ಪ್ರೀತಿ ಬೆರೆಸಿ
ನೇರವಾಗಿ ಮಾತಿಗಿಳಿಯುವ-
ಮನಸಿಗಿಳಿಯುವ ಹೃದಯಸ್ಪರ್ಷಿ
ಜೀವಿಗಳು ಈ
ಮೂರುದಿನಗಳಲಿ ನೂರು ಭಾವಗಳು
ಮೂಡಿ ಮರಿಹಾಕಿವೆ
ಕಾಜಾಣದ ಗೂಡಿನಲಿ ಒಂದಾಗಿ.

ಸುಂದರವೀ ಕವಿಕೂಟ ಸುಮಧುರವಾದ
ಪ್ರಕೃತಿ ನೋಟ ಜೊತೆಗೆ ಸವಿ ಸವಿಯಾದ ಸಿಹಿಯೂಟ
ರವಿಯೂ ತಣ್ಣಗಾಗಿದ್ದನು 
ಕವಿತೆಗಳನುಂಡು
ಬೀಸಿಬರುವ ಗಾಳಿಯಲಿ ಮಾಸಿಹೋಗದ
ಮನಸೊಂದು ಮತ್ತೆ ಮತ್ತೆ
ಹಾಡಾಗುತ್ತಿತ್ತು ಸತ್ಯ.. ಸತ್ಯ..

ಕೂಡಿಕಳೆದ ಕ್ಷಣಗಳು ಕಡಿಮೆ
ಕೇಳಿ ಕಲಿಯಲಾಗದು ಸಾಹಿತ್ಯವನು
ಮಾಡಬೇಕಿಲ್ಲಿ ದುಡುಮೆ
ದೂರದೂರದಿಂದ ಬಂದಿದ್ದವು 
ಕವಲುದಾರಿಗುಂಟ ಕವಿತೆಗಳು
ಒಂದಾಗಿ ಕಳೆದು ಕಟ್ಟಿಕೊಂಡವು ತನ್ನಷ್ಟಕ್ಜೆ ಬಂದಂತೆ
ತನ್ನೊಲುಮೆಯ ಗೂಡನು
ಗೂಡಿನೊಳಗಿನ ಲಾಟಿನು
ಬೆಳಕು ನೀಡಿತ್ತು ಹೃದಯದಲಿ ಕಾಜಾಣದ
ಪ್ರೀತಿನೂ, ಭೇಟಿನೂ.

ಅಗಲಿಬರುವಾಗ ತಗುಲಿದಂತಾಯ್ತು
ಹೃದಯದ ಕಾಲಿಗೊಂದು ಕಲ್ಲು
ನಾಲಿಗೆಯಲಿ ಕವಿತೆಯ ಸವಿಯುಳಿದಿದೆ
ಇಳಿದು ಹೋಗಲು ಮನಸಿಲ್ಲ 
ಕಾಜಾಣ ಕುಳಿತು ಕೂಗುವ ಕಟ್ಟೆ
ನೆನೆದು ನೆನೆದು ಹಿಗ್ಗುವುದಷ್ಟೇ ಅಲ್ಲ 
ಮತ್ತೆ ಮತ್ತೆ ನೆನಪಾಗುವಂತೆ,
ನೇನಪಾಗುವ ನೆನಪಾಗುಳಿಯಿತು 
"ಕಾಜಾಣದ ಕಾವ್ಯ ಕಮ್ಮಟ"
ಬದುಕಿನ ಹಕ್ಕಿಗೆ ರೆಕ್ಕೆಯಾದದ್ದು ಅಷ್ಟೇ ದಿಟ

ಕವಿಮನಸೊಂದು ಹಾಡಾಗುವದು ಈ
ಕಾಜಾಣದ ಗೂಡಿನಲಿ...
ಕಾಜಾಣದ ಗೂಡು ನಾಡಾಗಲಿ...!!

=ಸುರೇಶ್.ಎಲ್.ರಾಜಮಾನೆ. ರನ್ನಬೆಳಗಲಿ.



1. ಕಾಜಾಣದ ಕನಸುಗಾರ ಬೇಲೂರು ರಘು(ನಗು)ನಂದನ್ ಸರ್ ಅವರೊಂದಿಗೆ


2. ಕನ್ನಡ ಸಾಹಿತ್ಯದ ಮೇರು ಪ್ರತಿಭೆ ಸತ್ಯಕಾಮರ "ಸುಮ್ಮನೆ" ಎದುರುಗಡೆ


 3. ನಿಷ್ಕಲ್ಮಷ ಕವಿಹೃದಯವುಳ್ಳ ಕಥೆಗಾರ್ತಿಯರಾದ 
ಸುನಂದ ಕಡಮೆ ಮೇಡಮ್ ಅವರೊಂದಿಗೆ


4. ವಿಶೇಷ ವ್ಯಕ್ತಿತ್ವವುಳ್ಳ ವೀಣಾ ಬನ್ನಂಜೆ ಮೇಡಮ್ ಅವರ ಜೋತೆಗೆ


5.ವಾಗ್ಮಿಗಳು ಪ್ರವಚನಕಾರರು ಆದ ಈಶ್ವರ್ ಮಂಟೂರ್ ಅವರೊಂದಿಗೆ


6.ಚಿತ್ರನಟಿ, ರಂಗಭೂಮಿ ಕಲಾವಿದೆ, ಜನಪ್ರಿಯ ಶಾಸಕಿಯರು ಆದ
ಉಮಾಶ್ರೀಯವರ ಹಸ್ತಾಕ್ಷರ ಪಡೆದ ಖುಷಿಯ ಕ್ಷಣ



7. ಸುಮ್ಮನೆ ಎದುರು ನಾನು ನನ್ನ ಗೆಳೆಯರು


8. 2015ರ ಕಾಜಾಣ ಯುವ ಪುರಸ್ಕಾರ ಪಡೆದ
ಬೆಂಕಿಪಟ್ಣ ಚಿತ್ರದ ಕತೆಗಾರ ಟಿ.ಕೆ.ದಯಾನಂದರ ಜೊತೆಗೆ.


9. ಕವಿತೆಯನ್ನ ಆಲಿಸುತ್ತಿರುವಾಗ


10. ಊಟದ ಜೊತೆಗೆ


11. ಕವಿಗೆಳೆಯರ ಬಳಗ


12. ಪ್ರೊ.ಟಿ.ಯಲ್ಲಪ್ಪ ರ್ ಜೊತೆಗೆ


13. ಪುಟಾಣಿ ಕವಿತೆಗಳೊಂದಿಗೆ


14. ನಾಗತಿಹಳ್ಳಿ ರಮೇಶ್ ಸರ್ ಜೊತೆಗೆ


15. ಭಾವಗೀತೆ ಹಾಡುವಾಗ



16. ಕಾವ್ಯಕಮ್ಮಟದ ಪ್ರಮಾಣಪತ್ರ ಪಡೆದ ಸಮಯ


17. ಕಾಜಾಣದ ಕವಿ ಬಳಗ


18. ಕತ್ತಲೆಗೆ ಬೆಳಕಿನೊಂದಿಗೆ ಬೆಳಕಿಗೆ
ಮೆರಗು ನೀಡಿದ ದೀವಿಗೆ


ಮೂರುದಿನಗಳಲಿ ನೂರು ಭಾವಗಳನ್ನು ಮನಸಿಗಿಳಿಸಿದ
ಕಾಜಾಣ ಕಾವ್ಯಕಮ್ಮಟ
ಮನದಲ್ಲಿ ಶಾಸ್ವತವಾದ ಕ್ಷಣಗಳನ್ನಉ 
ನಮ್ಮ ಬದುಕಿಗೆ ಒದಗಿಸಿದೆ.

ಹೋಸ ತಲೆಮಾರಿನ ಬದುಕು ಕಳೆದುಕೊಳ್ಳುತ್ತಿರುವ
ಸಾಂಸ್ಕ್ೃತಿಕ ಘಟ್ಟಗಳ
ಕುರಿತು
ತಿಳಿದುಕೊಂಡು ಹೆಜ್ಜೆ ಇಡಲು ನಾವೆಲಾಲ ಒಂದಾಗಿ
ಕಟ್ಟೋ ಸಾಹಿತ್ಯದ   ದಾರಿ ಅಲ್ಲಿರುವ
ತೋಡಕುಗಳನ್ನು ತಿದ್ದಿಕೊಂಡು
ಸಾಗುವತ್ತ ನಡೆಯುತ್ತಿರುವ
ಈ ಬಳಗದ ಜೊತೆಗೆ ಕಳೆದ ಮೂರುದಿನಗಳು
ನನ್ನ ಬದುಕಿನಲಿ 
ಅಮೂಲ್ಯವಾದವುಗಳು.




=$ಸೂರ್ಯ *
ಸುರೇಶ್.ಎಲ್.ರಾಜಮಾನೆ, ರನ್ನಬೆಳಗಲಿ