ಸೋಮವಾರ, ಡಿಸೆಂಬರ್ 22, 2014

"ನನ್ನ ಸವಿನೆನಪುಗಳ ಇತಿಹಾಸ'ದ ಪುಟಗಳಲ್ಲಿ ದಾಖಲಾದ ಕ್ಷಣಗಳು

ನಾವು "ಗುಬ್ಬಿ ಗೂಡಿನ"ಲಿ ಗುಬ್ಬಚ್ಚಿಗಳಾದಾಗ.

ದಿನಾಂಕ 20-12-2014

ವಿಜಯಪುರದಲ್ಲಿ ಮುಂಜಾನೆಯ ಸಮಯದಲಿ ಹಕ್ಕಿಗಳು ಚಿಲಿಪಿಲಿ ಗುಟ್ಟುವ ಸಮಯಕ್ಕೆ ಸರಿಯಾಗಿ ಜಿಲ್ಲಾ ಸರಸ ಸಂವಹನ
ಕಾರ್ಯಕ್ರಮದೊಂದಿಗೆ ಆತ್ಮೀಯರು ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತರೂ ಮೇಲಾಗಿ ವಿಜ್ಞಾನ ಶಿಕ್ಷಕರೂ ಆದ ನಾರಾಯಣ ಬಾಬಾನಗರ್ ಸರ್ ಅವರ "ಗುಬ್ಬಿಗೂಡು" ಪುಸ್ತಕ ಬಿಡುಗಡೆ ಸಮಾರಂಭ. ನನ್ನ ನೆಚ್ಚಿನ ಪತ್ರಿಕೆ "ನಿಮ್ಮೆಲ್ಲರ ಮಾನಸ"ದಲ್ಲಿ ಪ್ರತಿ ತಿಂಗಳೂ ಚಿಲಿಪಿಲಿಗುಟ್ಟಿರುವ  ಹೃದಯದೊಳಗಿನ ಭಾವಗಳು ಬುತ್ತಿಗಂಟಿನಂತೆ ಕೂಡಿಕೊಂಡು ಒಂದೆಡೆ ಸೆರಿ ಒಂದು ಪುಸ್ತಕರೂಪದಲ್ಲಿ ಹೊರಬರುವ ಶುಭಘಳಿಗೆ. ಪತ್ರಿಕೆಯ ಸಂಪಾದಕರಾದ ಕೆ,ಗಣೇಶ್.ಕೊಡೂರ್ ಸರ್ ಅವರ ಅಥಿತಿ ಸ್ಥಾನವಿದ್ದ ಈ ಸಭೆಯು ಪ್ರಾರಂಬವಾಗಿ ತುಂಬಾನೆ ಹೊತ್ತಾಗಿತ್ತು. ಸುಮಾರು 190 ಕಿ,ಮೀ ದೂರದಿಂದ ನಾನು ಅಲ್ಲಿಗೆ ಹೋಗೋವಷ್ಟರಲ್ಲಿ ಕಾರ್ಯಕ್ರಮ ಮುಗಿದೇ ಹೋಗಬಹುದು ಎಂಬ ಆತಂಕ ಒಂದುಕಡೆಯಿದ್ದರೇ ಬಂದಿರುವ ಅಥಿತಿಮಹೋದಯರನ್ನು ಭೇಟಿಯಾದರೂ ಮಾಡಬಹುದೆಂಬ ಭರವಸೆಯಿಂದ ಪ್ರಯಾಣ ಸಾಗಿಸಿದ್ದೆ. ಕುಷ್ಟಗಿ ತಾಲೂಕಿನ ನೀರಲೋಟಿಯಿಂದ ಗೆಳೆಯ ರಾಮೂ ದೇಸಾಯಿ ಮತ್ತು ಸಂಗು ಅಂಗಡಿ, ಗುಲ್ಬರ್ಗಾದಿಂದ ರಾಘವೇಂದ್ರ ಮಠದ್, ಎಲ್ಲರೂ ಒಂದೊಂದು ದಿಕ್ಕಿನಿಂದ ಬಂದು ಒಂದೆಡೆ ಸೇರಬಹುದೆಂದು ನಿಶ್ಚಯಿಸಿದ್ದೆವು. ರಾಮೂ, ಸಂಗು, ಹಾಗೂ ರಾಘವೇಂದ್ರ, ನನಗಿಂತ ಮುಂಚೆನೇ ಕಾರ್ಯಕ್ರಮಕ್ಕೆ ಹಾಜರಾಗಿದ್ದರೂ ಮೋಸ್ಟ್ಲಿ ಕಾರ್ಯಕ್ರಮಕ್ಕೆ ಹಾಜರಾದವರಲ್ಲಿ ನಾನೆ ಕೊನೆಯವನಿರಬೇಕು ಅನಿಸಿತು,



               ಲೇಟಾದರೂ ಪರವಾಗಿಲ್ಲ ವಿಧಿಯನ್ನುವುದು ನನ್ನನ್ನು ಹೇಟ್ ಮಾಡಲಿಲ್ಲ ಕೈ ಹಿಡಿಯಿತು ಮನಸಿಗೆ ಖುಷಿ ನೀಡಿತು ಹೇಗೆ ಅಂತೀರಾ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಂತೇಯೇ ಆತ್ಮೀಯತೆಯಲ್ಲಿ ಅಣ್ಣನಂತೆ ಕಂಡ ಗಣೇಶ ಕೊಡೂರ ಸರ್ ಅವರಿಗೆ ಸನ್ಮಾನಿಸುವ ಕಾರ್ಯಕ್ರಮ ಅದರ ದೊಡ್ಡ ಜವಾಬ್ದಾರಿಯನ್ನು ಹಿರಿಯರಾದ ಬಾಬಾನಗರ್ ಸರ್ ಮಾನಸದ ಓದುಗರಾದ ಸುರೇಶ್ ರಾಜಮಾನೆ, ರಾಘವೇಂದ್ರ ಮಠದ್ ಹಾಗೂ ರಾಮೂ ದೇಸಾಯಿ ಮತ್ತು ಸಂಗು ಅಂಗಡಿ ಜೊತೆಗೆ ಪ್ರಮೋದ್ ಕುಮಾರ್ ಪತ್ತಾರ್ ಅವರು ನೆರವೇರಿಸಬೇಕೆಂದು ಹೇಳಿದರು ಎದೆಯಾಕೋ ದಡಬಡಿಸಿತು ಮೊದಲನೇ ಕಾರಣವೇನೆಂದರೆ ನಮ್ಮಿಂದ ಸನ್ಮಾನಿತರಾಗುತ್ತಿರುವ ಮೊದಲಿಗರು ಗಣೇಶ್ ಸರ್ ಅನ್ನೋ ಹೆಮ್ಮೆ ಒಂದುಕಡೆಯಾದರೆ, ಹಿರಿಯರೆಲ್ಲರೂ ಇರುವಾಗ ಈ ಕಿರಿಯರ ಮೇಲಿನ ಹಿರಿಯ ಜವಾಬ್ದಾರಿ ನೆನಪಾಗಿ ಮೂಕವಿಸ್ಮಿತರಂತೆ ನಿಂತಿದ್ದಂತು ಮನಸಾಕ್ಷಿ ಒಪ್ಪಿಕೊಂಡಿತು. ನಮ್ಮ  ಅದೃಷ್ಟವೇ ಸರಿ ಎಂದು ಸನ್ಮಾನಿಸಿದ ಮರುಕ್ಷಣ ಗಣೇಶ್ ಸರ್ ಮೈಕ್ ಹಿಡಿದು ಮಾತಾಡೋಕೆ ನಿಂತರು ನನಗೋಸ್ಕರಾ ಕಾದಿದ್ದರೇನೋ ಅನಿಸಿತು. ಅವರ ಮಾತಿನಲ್ಲಿ ಅವರ ಆಸೆ ಕನಸು ಗುರಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಹಾಗೆಯೇ ಯುವ ಬರಹಗಾರರಿಗೆ ತಮ್ಮ ಸಲಹೆಗಳನ್ನು ನೀಡಿದರು. ಅವರ ಸರಳ ಬಾಷಾಪ್ರಯೋಗದ ಜೊತೆಗೆ ಬಿಚ್ಚು ಮನಸ್ಕರಾಗಿ ಮಾತನಾಡಿದ್ದು ಸಭೆಗೊಂದು ಚೈತನ್ಯ ನೀಡುವಂತಿತ್ತು.

             





ನಾವುಗಳೆಲ್ಲರೂ ಗುಬ್ಬಿಗೂಡಿನ ಗುಬ್ಬಚ್ಚಿಗಳು. ನಮ್ಮನೆಲ್ಲ ಒಂದೆಡೆ ಸೇರಿಸಿದ ನಾರಾಯಣ ಬಾಬಾನಗರ ಸರ್ ನಮಗೊಂದು ಗೂಡನ್ನು ಕಟ್ಟಿಕೊಟ್ಟರು.


                       ನಮ್ಮ ನಮ್ಮಲ್ಲಿಯೇ ಮಾತುಕತೆಗಳು ಹರಟೆ, ಚೇಷ್ಟೆಗಳು ಜರುಗಿದವು. ಊಟದ ಸಮಯ ಎಲ್ಲರೂ ಎಕ್ಸಲಂಟ ಕನ್ನಡಮಾದ್ಯಮ ಪ್ರೌಢ ಶಾಲೆಯ ಆವರಣದಲ್ಲಿ ಸುಂದರ ಪರಿಸರದ ಮದ್ಯೆ ನಿಂತು ಸವಿದ ಸವಿಯೊಳಗೆ ಸ್ನೇಹದ ಸೆಳೆತವಿತ್ತು ಘಮ್ ಎನ್ನುವಂತಿತ್ತು. ಇದಾದ ನಂತರ ಗಣೆಶ ಕೊಡೂರ್ ಸರ್ ಜೊತೆಗೊಂದಿಷ್ಟು ಸಮಯ...


                      ಗಣೆಶ ಕೊಡೂರ ಅವರ ಪ್ರತಿ ಮಾತಿನಲ್ಲಿಯೂ ತಿದ್ದಿ ಹೇಳುವ ಸದ್ದಕೇಳಿಸಿತು. ಅವರ ಮಾತಿನಲ್ಲಿರುವ ಸತ್ಯತೆಯೊಂದಿಗೆ ವಾಸ್ತವತೆಯ ಅರಿವಿರಬಹುದಾದ ಅಂಶಗಳು ಮನಸಿಗಿಳಿದವು. ಅವರಿಗಿರುವ ಕಡಿಮೆ ಸಮಯದಲ್ಲಿಯೇ ನಮ್ಮ ಕ್ಷೇಮ ಸಮಾಚಾರದೊಂದಿಗೆ, ಬದುಕು ಬರಹದ ಕುರಿತು ಪರಸ್ಪರ ಹಂಚಿಕೊಂಡು ನಮ್ಮೊಂದಿಗೆ ಕಳೆದ ಾ ಕ್ಷಣಗಳು ನಮ್ಮ ಜೀವನದ ಅಮೂಲ್ಯ ಕ್ಷಣಗಳಲ್ಲಿ ಸೇರಿಹೋದವು. ಆ ಕ್ಷಣಗಳನ್ನೇನಾದರೂ ಕಳೆದುಕೊಂಡಿದ್ದರೇ ಬದುಕಿನಲ್ಲೇನೋ ಕೊರತೆಯಿದೆಯಲ್ಲ ಅನ್ನುವ ಭಾವ ನಮ್ಮನು ಕಾಡುತ್ತಿತ್ತೋ ಏನೋ ಅನಿಸಿತು.


                      ಸ್ನೇಹದ ಸಡಗರದಲ್ಲಿ "ಗುಬ್ಬಿ ಗೂಡು" ಕಟ್ಟಿದ ನಾರಾಯಣ ಬಾಬಾನಗರ್ ಸರ್ ನಮ್ಮನ್ನು ಬರಮಾಡಿಕೊಂಡು ನಮಗೊದಗಿಸಿದ ಆ ಅಮೂಲ್ಯ ಸಮಯದಲ್ಲಿ ನಮ್ಮ ಮೆಲಿರುವ ಪ್ರೀತಿಯನ್ನು ನಮ್ಮೆದುರಲ್ಲಿಯೇ ಕಾಣುವಂತಾಯಿತು. ಅವರ ಸ್ನೇಹಪೂರ್ವಕವಾದ ಆ ಆವ್ಹಾನ ಅಂದಿನ ಸಮಾರಂಭಕ್ಕೆ ಕೊನೆ ಹೇಳಲೂ ಕೂಡಾ ಮನಸಿಲ್ಲದಂತೆ ಮನಸೊಳಗಿಳಿಯಿತು . ಅವರ ಸಹೃದಯಿ ಮನೋಭಾವ, ಸಿಟ್ಟಿರದ ಆ ಮುಗುಳು ನಗು, ಮನಮುಟ್ಟಿ ಮಾತನಾಡಿಸುವಂತಿತ್ತು ಅಂತಹ ಆತ್ಮೀಯರ ಜೊತೆಗೆ ಕಳೆದ ಕ್ಷಣಗಳೂ ಕೂಡಾ ಸವಿನೆನಪುಗಳ ಇತಿಹಾಸದಿ ಸೇರಿಹೋದವು.



                ಬರಯುವ ಮನಸಿನಲಿ ಬೆರೆತುಕೊಂಡರೆ ಬೆಂದ ಮನಸ್ಸೂ ಕೂಡಾ ಭಾವನೆಗಳ ಚಿಲುಮೆಯಾಗುವದು. ಬಾನುವಾರದ ಈ ಭಾವನಾತ್ಮಕ ಸಭೆಯೊಳಗೆ ಸಮಾನ ಮನಸ್ಕರು ಸೇರಿ ಸಂವಹನ ನಡೆಸು ರೀತಿ ನನಗಂತೂ ತುಂಬ಻ ಹಿಡಿಸಿತು. ಸಂವಹನ ಸಫಲವಾಗಬೇಕಾದರೆ ಕಲಿಕೆಯು ಸಕಾರಾತ್ಮಕತೆಯಿಂದ ಕೂಡಿರಬೇಕು ಅನ್ನೋ ನಾಗರಾಜ್ ಸರ್ ಅವರ ಮಾತು ಮನಸಿನಲ್ಲಿ ಮನೆಮಾಡಿದಂತೆ ಉಳಿದುಬಿಟ್ಟಿದೆ.


               ಸರಿ ಸುಮಾರು ನಾಲ್ಕು ಗಂಟೆಗೆ ಮುಗಿದ ಈ ಸಭೆಯು ತುಂಬಾ ಅದ್ಭುತವಾದ ಕ್ಷಣಗಳನ್ನು ನಮಗೊದಗಿಸಿತಲ್ಲದೇ ಅದ್ಭುತ ವಿಚಾರಗಳನ್ನೂ ಮನಸಿಗಿಳಿಸಿತು. ನಾರಾಯಣ ಬಾಬಾನಗರ ಸರ್ ಅವರ ಗುಬ್ಬಿಗೂಡು ಪುಸ್ತಕವು ಅವರು ನಮ್ಮ ಮೇಲಿಟ್ಟಿರುವ ಪ್ರೀತಿಯಷ್ಟೇ ಪವಿತ್ರತೆಯನ್ನು ಹೊಂದಿದೆ. ಇಲ್ಲಿರುವ ಬರಹಗಳು ಅವರ ವದುಕಿನೊಂದಿಗಿನ ಹೋರಾಡದ ಕ್ಷಣಗಳೊಂದಿಗೆ ವಿಜ್ಞಾನದ ಛಾಪನ್ನು ಮೂಡಿಸುವಂತಿವೆ. ಅವರ ಪುಸ್ತಕ ನಮ್ಮ ಕೈಯಿಗಿಟ್ಟು ಆತ್ಮೀಯತೆಯಿಂದಲೇ ಬೀಳ್ಕೊಟ್ಟರು.




                21-12-2014 ರ ಸಂಡೇ ಸಾರ್ಥಕತೆಯ ಕ್ಷಣವಾಯಿತು.








=ಸೂರ್ಯ*
ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ.