ಗುರುವಾರ, ಮಾರ್ಚ್ 27, 2014

ಇದು ಬರಿ ಬೆಳಗಲ್ಲ... ಜಗದ ಬೆಳಕು



ಪರದೆಯ ಹಿಂದಿನ ಬಣ್ಣ
ನಗುತ್ತಿದೆ
ನಕ್ಕು ಬೀಗುತ್ತಿದೆ
ಸೊಕ್ಕಿನಿಂದಲ್ಲ,
 ಇಳೆಯ ಗೆಳೇಯನ
ಹೊಳಪಿನಿಂದ.
 
ಸಕಲ ಜೀವರಾಶಿಗೆ
ಸಹಜವಾಗಿ ಸಿಗುವ ಸೂರ್ಯ*
ತುಂಬಲು ಮತ್ತಷ್ಟು
ಮನಸಿಗೆ ದೈರ್ಯ
ತಾನಿದ್ದು
ಬೆಳಕಾಗಿ
ತನ್ನಿರುವಿಕೆಯ
ತಾನರಿಯದೆ.
 
ಮರದಮರೆಯಲ್ಲಿ ನಿಂತು
ನಕ್ಕು ನಗಿಸುತ್ತಾನೆ
ಎಬ್ಬಿಸಿ
ಎಚ್ಚರಿಸುತ್ತಾನೆ 
ಬಾಗಿಲ ತೆರೆದು
ನೇಗಿಲಿನೊಂದಿಗೆ
ಹೆಗಲಿಗೇರುತ್ತಾನೆ
ಹಗಲೆಂದುಕೊಂಡವನು
ಹಳಿದರೂ
ಚಿಂತಿಸದೆ
 
ಜನರೆದುರು ತಲೆ ಏರಿ
ಕುಳಿತರೂ
ಮುಖಭಾವವೇ ಬೆಳಕು
ಎದೆಯೊಳಗಿಲ್ಲದೇ
ಸ್ವಲ್ಪವೂ ಹುಳುಕು
ಮುಗಿಲಿನಿಂದೆದ್ದು ಮನೆಯಂಗಳಕ್ಕೆ
ಇಳಿದು ಆಡುವನು
ಜಗದ ಮಗನಾಗುವನು
ನೋಡಿ ಇವನದು
ಹೊಳೆವ ಕುಡಿ
ಮುಗಿಲ ಮುಖದಲ್ಲಿ
ಮಾಡುವ ಮೋಡಿ.
 
 
=ಸೂರ್ಯ*
=ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ.