ಜ್ಯೂನಿಯರ್ ಬೇಂದ್ರೆ ಬಂದಿದ್ರು ...
ಇಂದು ಸಂಡೆ 2-2-2014
ಮುಂಜಾನೆ 11 ಗಂಟೆಗೆ ಲಿಂಗಸಗೂರು ತಾ|| ಯರಡೋಣಾ ಗುರುಮಠದಲ್ಲಿ ಸಾಮರ್ಥ್ಯಾಧಾರಿತ ಶಿಕ್ಷಣ ಕುರಿತು ಸಂವಾದ ಕಾರ್ಯಕ್ರಮ ಜರುಗಿತು. ವಿಶೇಷ ಉಪನ್ನಯಾಸಕಕರಾಗಿ ದಾರವಾಡದ ಶ್ರೀ ಸುರೇಶ್ ಕುಲಕರ್ಣಿ ಸರ್ ಬಂದಿದ್ರು ಅವರು ಬೇಂದ್ರೆಯವರ ಒಡನಾಡಿ ಅಂದಾಗ ಒಂಥರಾ ಆಶ್ಚರ್ಯವಾಯಿತು ಹಾಗೂ ಅವರು ಅದೃಷ್ಟವಂತರೂ ಅನಿಸಿತು. ಮಕ್ಕಳ ಮನಸ್ಸನ್ನು ಶಿಕ್ಷಕರು ಕೇಂದ್ರಿಕರಿಸುವಂತೆ ಶಿಕ್ಷಕರ ಮನಸುಗಳನ್ನು ಕೇಂಧ್ರಿಕರಿಸಿ ಸತತ 4 ಗಂಟೆಗಳವರೆಗೂ ಉಪನ್ಯಾಸ ನೀಡಿದರೂ ಅನ್ನೋದಕ್ಕಿಂತ ನಮ್ಮ ಆತ್ಮೀಯತೆಯ ಜೊತೆಗೆ ತಮ್ಮ ಹದವಾದ ಹೃದಯದ ಭಾವನೆಗಳನ್ನು ಹಂಚಿಕೊಂಡರು ಅಂತ ಹೇಳಬಹುದು.
ಮಕ್ಕಳ ಮನಸ್ಸು ಮೃದುವಾದದ್ದು ಅದನ್ನು ಹದವಾಗಿಸಲು ಗಟ್ಟಿಗೊಳಿಸಲು ಬೋದನೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೇಗಳನ್ನು ತಿಳಿಸಿದರು. ಹಲವು ಕಸದಿಂದ ರಸ ಮಾಡುವ ವಿದ್ಯೆಗಳ ಬಗ್ಗೆಯೂ ತಿಳಿಸಿದರು. ನಂತರ ಊಟದ ಸಮಯ ಮುಗಿದ ಮೇಲೆ ಡಾ|| ಬೇಂದ್ರೆಯವರ ಜೀವನದ ಆಶ್ಚರ್ಯಕರ ಸಂಗತಿಗಳ ಬಗ್ಗೆ ತಮ್ಮ ಹೃದಯಾಂತರಾಳದಿಂದ ನಮ್ಮ ಹೃದಯದೊಳಗಿಳಿಸಿದರು. ನಿಜವಾಗಲೂ ಈ ಸಂಡೆ ವೇಸ್ಟ ಆಗಲಿಲ್ಲವಲ್ಲ ಅಂತ ಖುಷಿಯಾಯ್ತು. ಬೇಂದ್ರೆಯವರ ಹುಟ್ಟು ಹಬ್ಬವನ್ನು ಆಚರಿಸಲಾಗದ ಸ್ಥಿತಿಯಲ್ಲಿದ್ದ ನಮಗೆಲ್ಲ ಬೇಂದ್ರೆಯವರನ್ನು ನೆನಪಿಸಿಕೊಟ್ಟ ಶ್ರೀ ಸುರೇಶ ಕುಲಕರ್ಣಿ ಸರ್ ಅವರಿಗೆ ಮನದಲ್ಲೆ ಧನ್ಯವಾದಗಳನ್ನು ತಿಳಿಸಿದೆ...
ಸಖೀಗೀತ, ಬೇಂಧ್ರೆಯವರು ಚಿತ್ರಿಸಿದ ಪೂಜಾ ವಿಧಾನಗಳನ್ನು ಸಾಹಿತ್ಯಿಕವಾಗಿ ತಿಳಿಸಿದ ರೀತಿಯನ್ನು ಅರಿತು ಮೂಖವಿಶ್ಮಿತನಾದೆ. ಅವರ ಜಾನಪದ ಶೈಲಿಯ ಕವಿತೆಗಳಲ್ಲಿ ಉತ್ತರಕರ್ನಾಟಕದ ಸಂಸ್ಕೃತಿಯೇ ಬಿತ್ತರಗೊಳ್ಳುತ್ತದೆ ಜೊತೆಗೆ ಅವರ ಬದುಕಿನ ಕ್ಷಣಗಳೂ ಕೂಡಾ ಬಿಚ್ಚಿಕೊಳ್ಳುತ್ತವೆ. ಅವರ ಬಗ್ಗೆ ಇಂದು ತಿಳೀಸಿದ ಮಾಹಿತಿಯನ್ನು ಕೇಳಿ ಅವರ ಬಗ್ಗೆ ಇನ್ನೂ ತಿಳಿಯಬೇಕೆನ್ನುವ ಹಂಬಲ ಹೆಚ್ಚಾಯ್ತು ಅವರ ಬದುಕಿನ ಕುತೂಹಲಗಳನ್ನು ತಿಳಿಸಿದ ಕುಲಕರ್ಣಿ ಸರ್ ಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎನಿಸಿತು. ಕೆಲವು ಸಂದರ್ಭಗಳಲ್ಲಿ ಮನರಂಜೆನೆಗೆ ಕೆಲವೂ ಜ್ಯೂನಿಯರ್ ಸ್ಟಾರ್ಸ ಗಳನ್ನ ಕರೆತರ್ತಾರಲ್ಲ ಬದರ ಬದಲು ಇಂತಹ ಅನುಭವಸ್ತರನ್ನು ವೇಧಿಕೆಗೇರಿಸಿದರೆ ತುಂಬಾ ಒಳ್ಳೆಯದೆನಿಸುತ್ತದೆ.
'ಕವಿದಿನ' ಸವಿದಿನವಾಯ್ತು ಅನಿಸಿತು.. ಕವಿಗೆ ನಮನನ್ನು ಸಲ್ಲಿಸುವ ಅವಕಾಶವೂ ಸಿಕ್ಕಂತಾಯ್ತು....
=ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ.
=ಸೂರ್ಯ*