ಸೋಮವಾರ, ಡಿಸೆಂಬರ್ 22, 2014

"ನನ್ನ ಸವಿನೆನಪುಗಳ ಇತಿಹಾಸ'ದ ಪುಟಗಳಲ್ಲಿ ದಾಖಲಾದ ಕ್ಷಣಗಳು

ನಾವು "ಗುಬ್ಬಿ ಗೂಡಿನ"ಲಿ ಗುಬ್ಬಚ್ಚಿಗಳಾದಾಗ.

ದಿನಾಂಕ 20-12-2014

ವಿಜಯಪುರದಲ್ಲಿ ಮುಂಜಾನೆಯ ಸಮಯದಲಿ ಹಕ್ಕಿಗಳು ಚಿಲಿಪಿಲಿ ಗುಟ್ಟುವ ಸಮಯಕ್ಕೆ ಸರಿಯಾಗಿ ಜಿಲ್ಲಾ ಸರಸ ಸಂವಹನ
ಕಾರ್ಯಕ್ರಮದೊಂದಿಗೆ ಆತ್ಮೀಯರು ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತರೂ ಮೇಲಾಗಿ ವಿಜ್ಞಾನ ಶಿಕ್ಷಕರೂ ಆದ ನಾರಾಯಣ ಬಾಬಾನಗರ್ ಸರ್ ಅವರ "ಗುಬ್ಬಿಗೂಡು" ಪುಸ್ತಕ ಬಿಡುಗಡೆ ಸಮಾರಂಭ. ನನ್ನ ನೆಚ್ಚಿನ ಪತ್ರಿಕೆ "ನಿಮ್ಮೆಲ್ಲರ ಮಾನಸ"ದಲ್ಲಿ ಪ್ರತಿ ತಿಂಗಳೂ ಚಿಲಿಪಿಲಿಗುಟ್ಟಿರುವ  ಹೃದಯದೊಳಗಿನ ಭಾವಗಳು ಬುತ್ತಿಗಂಟಿನಂತೆ ಕೂಡಿಕೊಂಡು ಒಂದೆಡೆ ಸೆರಿ ಒಂದು ಪುಸ್ತಕರೂಪದಲ್ಲಿ ಹೊರಬರುವ ಶುಭಘಳಿಗೆ. ಪತ್ರಿಕೆಯ ಸಂಪಾದಕರಾದ ಕೆ,ಗಣೇಶ್.ಕೊಡೂರ್ ಸರ್ ಅವರ ಅಥಿತಿ ಸ್ಥಾನವಿದ್ದ ಈ ಸಭೆಯು ಪ್ರಾರಂಬವಾಗಿ ತುಂಬಾನೆ ಹೊತ್ತಾಗಿತ್ತು. ಸುಮಾರು 190 ಕಿ,ಮೀ ದೂರದಿಂದ ನಾನು ಅಲ್ಲಿಗೆ ಹೋಗೋವಷ್ಟರಲ್ಲಿ ಕಾರ್ಯಕ್ರಮ ಮುಗಿದೇ ಹೋಗಬಹುದು ಎಂಬ ಆತಂಕ ಒಂದುಕಡೆಯಿದ್ದರೇ ಬಂದಿರುವ ಅಥಿತಿಮಹೋದಯರನ್ನು ಭೇಟಿಯಾದರೂ ಮಾಡಬಹುದೆಂಬ ಭರವಸೆಯಿಂದ ಪ್ರಯಾಣ ಸಾಗಿಸಿದ್ದೆ. ಕುಷ್ಟಗಿ ತಾಲೂಕಿನ ನೀರಲೋಟಿಯಿಂದ ಗೆಳೆಯ ರಾಮೂ ದೇಸಾಯಿ ಮತ್ತು ಸಂಗು ಅಂಗಡಿ, ಗುಲ್ಬರ್ಗಾದಿಂದ ರಾಘವೇಂದ್ರ ಮಠದ್, ಎಲ್ಲರೂ ಒಂದೊಂದು ದಿಕ್ಕಿನಿಂದ ಬಂದು ಒಂದೆಡೆ ಸೇರಬಹುದೆಂದು ನಿಶ್ಚಯಿಸಿದ್ದೆವು. ರಾಮೂ, ಸಂಗು, ಹಾಗೂ ರಾಘವೇಂದ್ರ, ನನಗಿಂತ ಮುಂಚೆನೇ ಕಾರ್ಯಕ್ರಮಕ್ಕೆ ಹಾಜರಾಗಿದ್ದರೂ ಮೋಸ್ಟ್ಲಿ ಕಾರ್ಯಕ್ರಮಕ್ಕೆ ಹಾಜರಾದವರಲ್ಲಿ ನಾನೆ ಕೊನೆಯವನಿರಬೇಕು ಅನಿಸಿತು,



               ಲೇಟಾದರೂ ಪರವಾಗಿಲ್ಲ ವಿಧಿಯನ್ನುವುದು ನನ್ನನ್ನು ಹೇಟ್ ಮಾಡಲಿಲ್ಲ ಕೈ ಹಿಡಿಯಿತು ಮನಸಿಗೆ ಖುಷಿ ನೀಡಿತು ಹೇಗೆ ಅಂತೀರಾ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಂತೇಯೇ ಆತ್ಮೀಯತೆಯಲ್ಲಿ ಅಣ್ಣನಂತೆ ಕಂಡ ಗಣೇಶ ಕೊಡೂರ ಸರ್ ಅವರಿಗೆ ಸನ್ಮಾನಿಸುವ ಕಾರ್ಯಕ್ರಮ ಅದರ ದೊಡ್ಡ ಜವಾಬ್ದಾರಿಯನ್ನು ಹಿರಿಯರಾದ ಬಾಬಾನಗರ್ ಸರ್ ಮಾನಸದ ಓದುಗರಾದ ಸುರೇಶ್ ರಾಜಮಾನೆ, ರಾಘವೇಂದ್ರ ಮಠದ್ ಹಾಗೂ ರಾಮೂ ದೇಸಾಯಿ ಮತ್ತು ಸಂಗು ಅಂಗಡಿ ಜೊತೆಗೆ ಪ್ರಮೋದ್ ಕುಮಾರ್ ಪತ್ತಾರ್ ಅವರು ನೆರವೇರಿಸಬೇಕೆಂದು ಹೇಳಿದರು ಎದೆಯಾಕೋ ದಡಬಡಿಸಿತು ಮೊದಲನೇ ಕಾರಣವೇನೆಂದರೆ ನಮ್ಮಿಂದ ಸನ್ಮಾನಿತರಾಗುತ್ತಿರುವ ಮೊದಲಿಗರು ಗಣೇಶ್ ಸರ್ ಅನ್ನೋ ಹೆಮ್ಮೆ ಒಂದುಕಡೆಯಾದರೆ, ಹಿರಿಯರೆಲ್ಲರೂ ಇರುವಾಗ ಈ ಕಿರಿಯರ ಮೇಲಿನ ಹಿರಿಯ ಜವಾಬ್ದಾರಿ ನೆನಪಾಗಿ ಮೂಕವಿಸ್ಮಿತರಂತೆ ನಿಂತಿದ್ದಂತು ಮನಸಾಕ್ಷಿ ಒಪ್ಪಿಕೊಂಡಿತು. ನಮ್ಮ  ಅದೃಷ್ಟವೇ ಸರಿ ಎಂದು ಸನ್ಮಾನಿಸಿದ ಮರುಕ್ಷಣ ಗಣೇಶ್ ಸರ್ ಮೈಕ್ ಹಿಡಿದು ಮಾತಾಡೋಕೆ ನಿಂತರು ನನಗೋಸ್ಕರಾ ಕಾದಿದ್ದರೇನೋ ಅನಿಸಿತು. ಅವರ ಮಾತಿನಲ್ಲಿ ಅವರ ಆಸೆ ಕನಸು ಗುರಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಹಾಗೆಯೇ ಯುವ ಬರಹಗಾರರಿಗೆ ತಮ್ಮ ಸಲಹೆಗಳನ್ನು ನೀಡಿದರು. ಅವರ ಸರಳ ಬಾಷಾಪ್ರಯೋಗದ ಜೊತೆಗೆ ಬಿಚ್ಚು ಮನಸ್ಕರಾಗಿ ಮಾತನಾಡಿದ್ದು ಸಭೆಗೊಂದು ಚೈತನ್ಯ ನೀಡುವಂತಿತ್ತು.

             





ನಾವುಗಳೆಲ್ಲರೂ ಗುಬ್ಬಿಗೂಡಿನ ಗುಬ್ಬಚ್ಚಿಗಳು. ನಮ್ಮನೆಲ್ಲ ಒಂದೆಡೆ ಸೇರಿಸಿದ ನಾರಾಯಣ ಬಾಬಾನಗರ ಸರ್ ನಮಗೊಂದು ಗೂಡನ್ನು ಕಟ್ಟಿಕೊಟ್ಟರು.


                       ನಮ್ಮ ನಮ್ಮಲ್ಲಿಯೇ ಮಾತುಕತೆಗಳು ಹರಟೆ, ಚೇಷ್ಟೆಗಳು ಜರುಗಿದವು. ಊಟದ ಸಮಯ ಎಲ್ಲರೂ ಎಕ್ಸಲಂಟ ಕನ್ನಡಮಾದ್ಯಮ ಪ್ರೌಢ ಶಾಲೆಯ ಆವರಣದಲ್ಲಿ ಸುಂದರ ಪರಿಸರದ ಮದ್ಯೆ ನಿಂತು ಸವಿದ ಸವಿಯೊಳಗೆ ಸ್ನೇಹದ ಸೆಳೆತವಿತ್ತು ಘಮ್ ಎನ್ನುವಂತಿತ್ತು. ಇದಾದ ನಂತರ ಗಣೆಶ ಕೊಡೂರ್ ಸರ್ ಜೊತೆಗೊಂದಿಷ್ಟು ಸಮಯ...


                      ಗಣೆಶ ಕೊಡೂರ ಅವರ ಪ್ರತಿ ಮಾತಿನಲ್ಲಿಯೂ ತಿದ್ದಿ ಹೇಳುವ ಸದ್ದಕೇಳಿಸಿತು. ಅವರ ಮಾತಿನಲ್ಲಿರುವ ಸತ್ಯತೆಯೊಂದಿಗೆ ವಾಸ್ತವತೆಯ ಅರಿವಿರಬಹುದಾದ ಅಂಶಗಳು ಮನಸಿಗಿಳಿದವು. ಅವರಿಗಿರುವ ಕಡಿಮೆ ಸಮಯದಲ್ಲಿಯೇ ನಮ್ಮ ಕ್ಷೇಮ ಸಮಾಚಾರದೊಂದಿಗೆ, ಬದುಕು ಬರಹದ ಕುರಿತು ಪರಸ್ಪರ ಹಂಚಿಕೊಂಡು ನಮ್ಮೊಂದಿಗೆ ಕಳೆದ ಾ ಕ್ಷಣಗಳು ನಮ್ಮ ಜೀವನದ ಅಮೂಲ್ಯ ಕ್ಷಣಗಳಲ್ಲಿ ಸೇರಿಹೋದವು. ಆ ಕ್ಷಣಗಳನ್ನೇನಾದರೂ ಕಳೆದುಕೊಂಡಿದ್ದರೇ ಬದುಕಿನಲ್ಲೇನೋ ಕೊರತೆಯಿದೆಯಲ್ಲ ಅನ್ನುವ ಭಾವ ನಮ್ಮನು ಕಾಡುತ್ತಿತ್ತೋ ಏನೋ ಅನಿಸಿತು.


                      ಸ್ನೇಹದ ಸಡಗರದಲ್ಲಿ "ಗುಬ್ಬಿ ಗೂಡು" ಕಟ್ಟಿದ ನಾರಾಯಣ ಬಾಬಾನಗರ್ ಸರ್ ನಮ್ಮನ್ನು ಬರಮಾಡಿಕೊಂಡು ನಮಗೊದಗಿಸಿದ ಆ ಅಮೂಲ್ಯ ಸಮಯದಲ್ಲಿ ನಮ್ಮ ಮೆಲಿರುವ ಪ್ರೀತಿಯನ್ನು ನಮ್ಮೆದುರಲ್ಲಿಯೇ ಕಾಣುವಂತಾಯಿತು. ಅವರ ಸ್ನೇಹಪೂರ್ವಕವಾದ ಆ ಆವ್ಹಾನ ಅಂದಿನ ಸಮಾರಂಭಕ್ಕೆ ಕೊನೆ ಹೇಳಲೂ ಕೂಡಾ ಮನಸಿಲ್ಲದಂತೆ ಮನಸೊಳಗಿಳಿಯಿತು . ಅವರ ಸಹೃದಯಿ ಮನೋಭಾವ, ಸಿಟ್ಟಿರದ ಆ ಮುಗುಳು ನಗು, ಮನಮುಟ್ಟಿ ಮಾತನಾಡಿಸುವಂತಿತ್ತು ಅಂತಹ ಆತ್ಮೀಯರ ಜೊತೆಗೆ ಕಳೆದ ಕ್ಷಣಗಳೂ ಕೂಡಾ ಸವಿನೆನಪುಗಳ ಇತಿಹಾಸದಿ ಸೇರಿಹೋದವು.



                ಬರಯುವ ಮನಸಿನಲಿ ಬೆರೆತುಕೊಂಡರೆ ಬೆಂದ ಮನಸ್ಸೂ ಕೂಡಾ ಭಾವನೆಗಳ ಚಿಲುಮೆಯಾಗುವದು. ಬಾನುವಾರದ ಈ ಭಾವನಾತ್ಮಕ ಸಭೆಯೊಳಗೆ ಸಮಾನ ಮನಸ್ಕರು ಸೇರಿ ಸಂವಹನ ನಡೆಸು ರೀತಿ ನನಗಂತೂ ತುಂಬ಻ ಹಿಡಿಸಿತು. ಸಂವಹನ ಸಫಲವಾಗಬೇಕಾದರೆ ಕಲಿಕೆಯು ಸಕಾರಾತ್ಮಕತೆಯಿಂದ ಕೂಡಿರಬೇಕು ಅನ್ನೋ ನಾಗರಾಜ್ ಸರ್ ಅವರ ಮಾತು ಮನಸಿನಲ್ಲಿ ಮನೆಮಾಡಿದಂತೆ ಉಳಿದುಬಿಟ್ಟಿದೆ.


               ಸರಿ ಸುಮಾರು ನಾಲ್ಕು ಗಂಟೆಗೆ ಮುಗಿದ ಈ ಸಭೆಯು ತುಂಬಾ ಅದ್ಭುತವಾದ ಕ್ಷಣಗಳನ್ನು ನಮಗೊದಗಿಸಿತಲ್ಲದೇ ಅದ್ಭುತ ವಿಚಾರಗಳನ್ನೂ ಮನಸಿಗಿಳಿಸಿತು. ನಾರಾಯಣ ಬಾಬಾನಗರ ಸರ್ ಅವರ ಗುಬ್ಬಿಗೂಡು ಪುಸ್ತಕವು ಅವರು ನಮ್ಮ ಮೇಲಿಟ್ಟಿರುವ ಪ್ರೀತಿಯಷ್ಟೇ ಪವಿತ್ರತೆಯನ್ನು ಹೊಂದಿದೆ. ಇಲ್ಲಿರುವ ಬರಹಗಳು ಅವರ ವದುಕಿನೊಂದಿಗಿನ ಹೋರಾಡದ ಕ್ಷಣಗಳೊಂದಿಗೆ ವಿಜ್ಞಾನದ ಛಾಪನ್ನು ಮೂಡಿಸುವಂತಿವೆ. ಅವರ ಪುಸ್ತಕ ನಮ್ಮ ಕೈಯಿಗಿಟ್ಟು ಆತ್ಮೀಯತೆಯಿಂದಲೇ ಬೀಳ್ಕೊಟ್ಟರು.




                21-12-2014 ರ ಸಂಡೇ ಸಾರ್ಥಕತೆಯ ಕ್ಷಣವಾಯಿತು.








=ಸೂರ್ಯ*
ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ.

ಶನಿವಾರ, ಆಗಸ್ಟ್ 2, 2014

ಸೂರ್ಯಾಸ್ತದ ಸೌಂದರ್ಯ*

 
ನಾ ನಡೆಯುವ ದಾರಿಯಲಿ ನನಗೊಲಿದ ಅಧ್ಭುತ ಸುಂದರಿಯರಲ್ಲಿ ಈ ಸಂಜೆ ಸೂರ್ಯನ
ಸೌಂದರ್ಯವೂ ಒಂದು.

ಗುರುವಾರ, ಮೇ 22, 2014

ಮಧುರಖಂಡಿಯ ಸುಮಧುರ ಕ್ಷಣಗಳು

 
 

11/5/2014
 
ಆಕಾಶವೇ ಚಪ್ಪರ ಭೂಮಿಯೇ ಮಂಟಪ
ಗಿಡಮರಗಳೇ ತಳಿರು ತೋರಣ
ಸಮಾನ ಮನಸ್ಸುಳ್ಳ
ಸಾತ್ವಿಕ ಹೃದಯಗಳೇ
ಸಮಾರಂಭದ ಜೀವಾಳ
...
ಪುಸ್ತಕದ ಸುಂದರ ಮುಖಬಾವ
ಸುಮಧುರ ಬರಹ
ಮಧುರಖಂಡಿಯ

ಸಮಾರಂಬಕ್ಕೆ ಹೋದ
ನನಗೆ
ಖುಷಿಯೋ ಖುಷಿ.

ಹತ್ತಿರದಿಂದ ನೋಡಿದ ನನಗೆ
ಅವರ
 ಅಂತರಾಳವನ್ನು ಅರಿಯುವ
ಅವಕಾಶ ನೀಡಿತು
ಈ ಪುಸ್ತಕದೊಳಗಿನ ಚಿತ್ರಣ
ತಿಳಿಸಿತು ಖಾಡೆ ಸರ್ ಜೀವನ

ಸಾಧಕರ ಸಾಲಿನಲಿ ನಮ್ಮವರು
ಸಂತೋಷವಾಯ್ತು
ಇವರೇ ಮೊದಲಿಗರು

ಅದ್ಭುತವಾಗಿತ್ತು ಸಮಾರಂಭ
ಭಾಗವಹಿಸಿದ್ದಕ್ಕೆ
ನನಗಂತು ಆನಂದ

ಗವಿಮಠರ ಗರಡಿಯಲಿ
ಕವಿಗಳ ಮೇಳ
ಸ್ಮರಿಸಿದ ಜೀವಗಳೊಂದಿಗೆ
ಸ್ಮರಣೀಯ ಕ್ಷಣಗಳ
ಸಮ್ಮೇಳನ

ಡಾ. ಖಾಡೆ ಸರ್ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ
ಹಾಗು ಅವರ ಬಗ್ಗೆ ಸಮಗ್ರ ಚಿತ್ರಣ ನೀಡಿದ ಶ್ರೀ ಗುರುರಾಜ ಲೂತಿ ಸರ್ ಅವರ ಈ ಮಾಲಿಕೆಯ ಪ್ರತಮ ಕೃತಿ
ಕೈಸೇರಿದಾಗ ನಾ ಕಣ್ಣಾಡಿಸಿದಾಗ ಕಂಡ ಡಾ. ಪ್ರಕಾಶ ಗ.ಖಾಡೆ ಸರ್ ನಿಜವಾಗ್ಲೂ ಸಾಧಕರಲ್ಲಿ ಮೊದಲಿಗರಾದದ್ದಕ್ಕೆ ನನಗಂತೂ ಹೆಮ್ಮೆಯನಿಸುತ್ತದೆ ಇದು ನಾವೆಲ್ಲ ಹೆಮ್ಮೆ ಪಡಲೇಬೇಕಾದ ವಿಷಯ..
 
ವಯಕ್ತಿಕವಾಗಿ ಡಾ.ಖಾಡೆ ಸರ್ ನನಗೆ ಪರಿಚಯವಾಗಿದ್ದು ನನ್ನ ಅದೃಷ್ಟ ಸಾಹಿತಿಗಳ ನಿಜವಾದ ಬಗೆ ಹೇಗಿರತ್ತೆ ಅನ್ನೋದನ್ನ ಅವರಲ್ಲಿ ಕಂಡಿದ್ದೆನೆ. ನನ್ನ ಜೀವನದಲ್ಲಿ ಮೊದಲನೆಯದಗಿ ಪರಿಚಯರಾದವರು ಸಾಧಕ ಸಾಹಿತಿಗಳಾದ ಡಾ.ಖಾಡೆ ಸರ್

ಎನ್ನುವದಕ್ಕೆ ಹೆಮ್ಮೆ ಪಡುತ್ತೆನೆ.
 
ಧನ್ಯವಾದಗಳೊಂದಿಗೆ
 
 
=ಸೂರ್ಯ*
ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ.

ಗುರುವಾರ, ಮಾರ್ಚ್ 27, 2014

ಇದು ಬರಿ ಬೆಳಗಲ್ಲ... ಜಗದ ಬೆಳಕು



ಪರದೆಯ ಹಿಂದಿನ ಬಣ್ಣ
ನಗುತ್ತಿದೆ
ನಕ್ಕು ಬೀಗುತ್ತಿದೆ
ಸೊಕ್ಕಿನಿಂದಲ್ಲ,
 ಇಳೆಯ ಗೆಳೇಯನ
ಹೊಳಪಿನಿಂದ.
 
ಸಕಲ ಜೀವರಾಶಿಗೆ
ಸಹಜವಾಗಿ ಸಿಗುವ ಸೂರ್ಯ*
ತುಂಬಲು ಮತ್ತಷ್ಟು
ಮನಸಿಗೆ ದೈರ್ಯ
ತಾನಿದ್ದು
ಬೆಳಕಾಗಿ
ತನ್ನಿರುವಿಕೆಯ
ತಾನರಿಯದೆ.
 
ಮರದಮರೆಯಲ್ಲಿ ನಿಂತು
ನಕ್ಕು ನಗಿಸುತ್ತಾನೆ
ಎಬ್ಬಿಸಿ
ಎಚ್ಚರಿಸುತ್ತಾನೆ 
ಬಾಗಿಲ ತೆರೆದು
ನೇಗಿಲಿನೊಂದಿಗೆ
ಹೆಗಲಿಗೇರುತ್ತಾನೆ
ಹಗಲೆಂದುಕೊಂಡವನು
ಹಳಿದರೂ
ಚಿಂತಿಸದೆ
 
ಜನರೆದುರು ತಲೆ ಏರಿ
ಕುಳಿತರೂ
ಮುಖಭಾವವೇ ಬೆಳಕು
ಎದೆಯೊಳಗಿಲ್ಲದೇ
ಸ್ವಲ್ಪವೂ ಹುಳುಕು
ಮುಗಿಲಿನಿಂದೆದ್ದು ಮನೆಯಂಗಳಕ್ಕೆ
ಇಳಿದು ಆಡುವನು
ಜಗದ ಮಗನಾಗುವನು
ನೋಡಿ ಇವನದು
ಹೊಳೆವ ಕುಡಿ
ಮುಗಿಲ ಮುಖದಲ್ಲಿ
ಮಾಡುವ ಮೋಡಿ.
 
 
=ಸೂರ್ಯ*
=ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ.

ಭಾನುವಾರ, ಫೆಬ್ರವರಿ 9, 2014

ಈ.. ಮ(ಅಮ)ರ

 
 
ಇದು
ನಾನಾಡಿಬೆಳೆದ ಸೀಬೇಕಾಯಿ
ಮರ
ನೆನದಾಗೆಲ್ಲ ಅದರ
ರುಚಿಯನುಂಡು
ನಾ ತನಿದ ನೆನಪುಗಳು
ಸದಾ ಅಮರ
 
ಇದರ ಹಸಿರಲಿ ನಾ
ಉಸಿರಾಡಿರುವೆ
ಈಗ
ಸಂಕಟ ಶುರುವಾಗಿದೆ
ಉಸಿರು
ನೀಡುವ ಹಸಿರಿಲ್ಲ
ನೆನಪು ಕೊಡೊ ನೆರಳಿಲ್ಲ
ರುಚಿಗೆ
ಶುಚಿ ನೀಡುವ
ಹಣ್ಣುಗಳಂತೂ ಇಲ್ಲವೇ
ಇಲ್ಲ
 
ಮರವೇನೋ ಒಣಗಿ
ಹೋಗಿದೆ
ಆದರೆ,
ಮನಸಿನಲ್ಲಿ ಸದಾ ಹಸಿರಾಗಿ
ಬೇರೂರಿ ನಿಂತಿದೆ
 
=ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ
=ಸೂರ್ಯ*

ಶನಿವಾರ, ಫೆಬ್ರವರಿ 8, 2014

ಮೌನ ಮಾತು

 
 
ಯಾರ ನೇರಕೂ ಮಾತಿಗಿಳಿಯದೇ
ಮೌನ ಧ್ವನಿಯಲಿ
ಕೂಗಿ ಕರೆದವು ಕಾನನದ ದಾರಿಗೆ
ಒರಗಿ ಕುಳಿತ ಕಲ್ಲುಗಳು..
ಮರುಗಿ ಮನ
ಮುಟ್ಟಿ ನೋಡಬೇಕೆಂದು ಹೋದೆ...
ಗಟ್ಟಿಯಾಗಿದ್ದವೂ
ಒಂದಲ್ಲ ಎರಡಲ್ಲ ಎಲ್ಲವೂ..
 
ಸಿಟ್ಟಿನಿಂದ
ಗಟ್ಟಿಯಾಯಿತು ಹೃದಯ
ಮುಟ್ಟಿಕೊಂಡಿತು ಉಡಿಯ..!!

=ಸೂರ್ಯ*

 

ಸೋಮವಾರ, ಫೆಬ್ರವರಿ 3, 2014

ಜ್ಯೂನಿಯರ್ ಬೇಂದ್ರೆ ಬಂದಿದ್ರು..


ಜ್ಯೂನಿಯರ್ ಬೇಂದ್ರೆ ಬಂದಿದ್ರು ...

ಇಂದು ಸಂಡೆ 2-2-2014

            ಮುಂಜಾನೆ 11 ಗಂಟೆಗೆ ಲಿಂಗಸಗೂರು ತಾ|| ಯರಡೋಣಾ ಗುರುಮಠದಲ್ಲಿ ಸಾಮರ್ಥ್ಯಾಧಾರಿತ ಶಿಕ್ಷಣ ಕುರಿತು ಸಂವಾದ ಕಾರ್ಯಕ್ರಮ ಜರುಗಿತು. ವಿಶೇಷ ಉಪನ್ನಯಾಸಕಕರಾಗಿ ದಾರವಾಡದ ಶ್ರೀ ಸುರೇಶ್ ಕುಲಕರ್ಣಿ ಸರ್ ಬಂದಿದ್ರು ಅವರು ಬೇಂದ್ರೆಯವರ ಒಡನಾಡಿ ಅಂದಾಗ ಒಂಥರಾ ಆಶ್ಚರ್ಯವಾಯಿತು ಹಾಗೂ ಅವರು ಅದೃಷ್ಟವಂತರೂ ಅನಿಸಿತು. ಮಕ್ಕಳ ಮನಸ್ಸನ್ನು ಶಿಕ್ಷಕರು ಕೇಂದ್ರಿಕರಿಸುವಂತೆ ಶಿಕ್ಷಕರ ಮನಸುಗಳನ್ನು ಕೇಂಧ್ರಿಕರಿಸಿ ಸತತ 4 ಗಂಟೆಗಳವರೆಗೂ ಉಪನ್ಯಾಸ ನೀಡಿದರೂ ಅನ್ನೋದಕ್ಕಿಂತ ನಮ್ಮ ಆತ್ಮೀಯತೆಯ ಜೊತೆಗೆ ತಮ್ಮ ಹದವಾದ ಹೃದಯದ ಭಾವನೆಗಳನ್ನು ಹಂಚಿಕೊಂಡರು ಅಂತ ಹೇಳಬಹುದು.

            ಮಕ್ಕಳ ಮನಸ್ಸು ಮೃದುವಾದದ್ದು ಅದನ್ನು ಹದವಾಗಿಸಲು ಗಟ್ಟಿಗೊಳಿಸಲು ಬೋದನೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೇಗಳನ್ನು ತಿಳಿಸಿದರು. ಹಲವು ಕಸದಿಂದ ರಸ ಮಾಡುವ ವಿದ್ಯೆಗಳ ಬಗ್ಗೆಯೂ ತಿಳಿಸಿದರು. ನಂತರ ಊಟದ ಸಮಯ ಮುಗಿದ ಮೇಲೆ ಡಾ|| ಬೇಂದ್ರೆಯವರ ಜೀವನದ ಆಶ್ಚರ್ಯಕರ ಸಂಗತಿಗಳ ಬಗ್ಗೆ ತಮ್ಮ ಹೃದಯಾಂತರಾಳದಿಂದ ನಮ್ಮ ಹೃದಯದೊಳಗಿಳಿಸಿದರು. ನಿಜವಾಗಲೂ ಈ ಸಂಡೆ ವೇಸ್ಟ ಆಗಲಿಲ್ಲವಲ್ಲ ಅಂತ ಖುಷಿಯಾಯ್ತು. ಬೇಂದ್ರೆಯವರ ಹುಟ್ಟು ಹಬ್ಬವನ್ನು ಆಚರಿಸಲಾಗದ ಸ್ಥಿತಿಯಲ್ಲಿದ್ದ ನಮಗೆಲ್ಲ ಬೇಂದ್ರೆಯವರನ್ನು ನೆನಪಿಸಿಕೊಟ್ಟ ಶ್ರೀ ಸುರೇಶ ಕುಲಕರ್ಣಿ ಸರ್ ಅವರಿಗೆ ಮನದಲ್ಲೆ ಧನ್ಯವಾದಗಳನ್ನು ತಿಳಿಸಿದೆ...

            ಸಖೀಗೀತ, ಬೇಂಧ್ರೆಯವರು ಚಿತ್ರಿಸಿದ ಪೂಜಾ ವಿಧಾನಗಳನ್ನು ಸಾಹಿತ್ಯಿಕವಾಗಿ ತಿಳಿಸಿದ ರೀತಿಯನ್ನು ಅರಿತು ಮೂಖವಿಶ್ಮಿತನಾದೆ. ಅವರ ಜಾನಪದ ಶೈಲಿಯ ಕವಿತೆಗಳಲ್ಲಿ ಉತ್ತರಕರ್ನಾಟಕದ ಸಂಸ್ಕೃತಿಯೇ ಬಿತ್ತರಗೊಳ್ಳುತ್ತದೆ ಜೊತೆಗೆ ಅವರ ಬದುಕಿನ ಕ್ಷಣಗಳೂ ಕೂಡಾ ಬಿಚ್ಚಿಕೊಳ್ಳುತ್ತವೆ. ಅವರ ಬಗ್ಗೆ ಇಂದು ತಿಳೀಸಿದ ಮಾಹಿತಿಯನ್ನು ಕೇಳಿ ಅವರ ಬಗ್ಗೆ ಇನ್ನೂ ತಿಳಿಯಬೇಕೆನ್ನುವ ಹಂಬಲ ಹೆಚ್ಚಾಯ್ತು ಅವರ ಬದುಕಿನ ಕುತೂಹಲಗಳನ್ನು ತಿಳಿಸಿದ ಕುಲಕರ್ಣಿ ಸರ್ ಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎನಿಸಿತು. ಕೆಲವು ಸಂದರ್ಭಗಳಲ್ಲಿ ಮನರಂಜೆನೆಗೆ ಕೆಲವೂ ಜ್ಯೂನಿಯರ್ ಸ್ಟಾರ್ಸ ಗಳನ್ನ ಕರೆತರ್ತಾರಲ್ಲ ಬದರ ಬದಲು ಇಂತಹ ಅನುಭವಸ್ತರನ್ನು ವೇಧಿಕೆಗೇರಿಸಿದರೆ ತುಂಬಾ ಒಳ್ಳೆಯದೆನಿಸುತ್ತದೆ.

            'ಕವಿದಿನ' ಸವಿದಿನವಾಯ್ತು ಅನಿಸಿತು.. ಕವಿಗೆ ನಮನನ್ನು ಸಲ್ಲಿಸುವ ಅವಕಾಶವೂ ಸಿಕ್ಕಂತಾಯ್ತು....



=ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ.
=ಸೂರ್ಯ*